-
ಹೌದು
-
1) ನೀವು ನೋಂದಣಿ ಮಾಡಿಕೊಂಡರೆ, ಒಂದು ಪ್ರಗತಿ ಇತಿಹಾಸದ ಜೊತೆಗೆ ಪ್ರಗತಿ ಮಾಹಿತಿಯನ್ನು ಪಡೆಯುವಿರಿ.
2) ಒಂದು ಸಣ್ಣ ಕೊಡುಗೆ ನೀಡುವ ಮೂಲಕ ಜಾಹೀರಾತು ರಹಿತವಾಗಿಯೂ ನೀವು ಕಲಿಯಬಹುದು.
-
ನಿಮ್ಮ ಕಡೆಯಿಂದ ಒಂದು ಸಣ್ಣ ಕೊಡುಗೆ ನೀಡಿ, ನಾವು ನಿಮ್ಮ ಖಾತೆಯಿಂದ ಜಾಹೀರಾತುಗಳನ್ನು ತೆಗೆದು ಬಿಡುತ್ತೇವೆ. ದಯವಿಟ್ಟು ತಾಳ್ಮೆಯಿಂದ ಇರಿ, ಯಾಕೆಂದರೆ ಇದು ಮ್ಯಾನ್ಯುವಲ್ ಪ್ರಕ್ರಿಯೆ.
-
ನಿಮ್ಮಿಂದ ಈ ರೀತಿಯಲ್ಲಿ ಸಹಾಯ ಆಗಬಹುದು – 1) ನಿಮ್ಮ ಲೈಕ್ ಮತ್ತು ಡಿಸ್ಲೈಕ್ ಕಮೆಂಟ್ ಮೂಲಕ
2) ಕಲಿಕೆಯ ಅನುಭವವನ್ನು ಹೇಗೆ ಉತ್ತಮಪಡಿಸಿಕೊಳ್ಳಬಹುದು ಎಂಬ ಬಗೆಗಿನ ನಿಮ್ಮ ಆಲೋಚನೆಗಳನ್ನು (ಮತ್ತು ಇನ್ನಿತರ ವಿಚಾರಗಳ ಬಗ್ಗೆ) ಬರೆಯುವ ಮೂಲಕ
3) ನಿಮ್ಮ ಸ್ನೇಹಿತರಿಗೆ ನಮ್ಮ ಬಗ್ಗೆ ಹೇಳುವ ಮೂಲಕ (ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ವೆಬ್ ಸೈಟ್ ಅನ್ನು ಹಂಚಿಕೊಂಡು, https://www.facebook.com/TouchTypingStudy ನಲ್ಲಿ ನಮ್ಮನ್ನು ಸೇರುವ ಮೂಲಕ).
-
ಕುರುಡು ಬೆರಳಚ್ಚು ಕಲಿಯಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದು ನಿಮ್ಮ ಮೇಲೆಯೇ ಅವಲಂಬಿತವಾಗಿರುತ್ತದೆ. ನಿಯಮಿತವಾಗಿ ಅಭ್ಯಾಸ ಮಾಡುವುದು ಬಹಳ ಮುಖ್ಯ. ಉತ್ತಮ ಫಲಿತಾಂಶಕ್ಕಾಗಿ, ದಿನಕ್ಕೆ ಒಂದು ಪಾಠವನ್ನಾದರೂ ಕಲಿಯಬೇಕೆಂದು ನಾವು ಸಲಹೆ ನೀಡುತ್ತೇವೆ.
ನೆನಪಿಡಿ, ಎಲ್ಲಾ ಅಕ್ಷರಗಳ ಸ್ಥಾನ ತಿಳಿದ ತಕ್ಷಣ ನೀವು ವೇಗವಾಗಿ ಬೆರಳಚ್ಚು ಮಾಡಲು ಸಿದ್ಧರಿದ್ದೀರಿ ಎಂದು ಅರ್ಥವಲ್ಲ. ಪ್ರತಿಯೊಂದು ಕೀಲಿಯು ಎಲ್ಲಿದೆ ಎಂದು ಯೋಚಿಸದೆ ಅಥವಾ ಕೀಲಿಮಣೆಯನ್ನು ನೋಡದೆ ಬೆರಳಚ್ಚು ಮಾಡಲು, ನಿಮ್ಮ ಬೆರಳುಗಳು 'ಸ್ನಾಯು ನೆನಪಿನ ಶಕ್ತಿ' ಎಂದು ಕರೆಯಲಾಗುವ ಚಲನಾ ಕೌಶಲವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ನಿರಂತರ ಅಭ್ಯಾಸದಿಂದ ಮಾತ್ರ ಇಂತಹ ಸ್ವಯಂಚಾಲಿತ ಚಲನೆಗಳು ಸಾಧ್ಯವಾಗುತ್ತವೆ. ನೆನಪಿಡಿ – ಅಭ್ಯಾಸದಿಂದ ಮಾತ್ರ ಪರಿಪೂರ್ಣತೆ ಸಾಧ್ಯ!
-
WPM ಅನ್ನು ಮಾಪನ ಮಾಡಲು, ನೀವು ಪ್ರತೀ ನಿಮಿಷಕ್ಕೆ ಎಷ್ಟು ಪದಗಳನ್ನು ಟೈಪ್ ಮಾಡಿದ್ದೀರಿ ಎಂದು ಪ್ರೋಗ್ರಾಂ ಲೆಕ್ಕ ಹಾಕುತ್ತದೆ: ಸ್ಪೇಸ್ ಮತ್ತು ವಿರಾಮ ಸೇರಿಸಿ, 1 ಪದ = 5 ಅಕ್ಷರಗಳು.
-
ತಾಂತ್ರಿಕವಾಗಿ ನಿಮಗೆ ಆವಶ್ಯಕತೆ ಇರುವುದು ಅಂತರಜಾಲ ಸಂಪರ್ಕ ಮಾತ್ರ. ಆದರೆ, ನಿಮ್ಮ ಸ್ಪರ್ಶ ಟೈಪಿಂಗ್ ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳಲು ನಿಮ್ಮಲ್ಲಿ ಪ್ರೇರಣೆ ಮತ್ತು ಸಂಕಲ್ಪ ಶಕ್ತಿ ಇರಬೇಕಾದುದೂ ಸಹ ಆವಶ್ಯಕ.
-
ನೀವು ಟೈಪಿಂಗ್ ಅನ್ನು ಶುರು ಮಾಡುವಾಗ Caps Lock ಆನ್ ಆಗಿಲ್ಲ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ. ಯಾವಾಗ Caps Lock ಆನ್ ಆಗಿರುತ್ತದೆಯೋ ಆಗ ನೀವು ಶಿಫ್ಟ್ ಕೀಲಿಯನ್ನು ಮತ್ತು ಸಂಬಂಧಿತ ಅಕ್ಷರವನ್ನು ಏಕಕಾಲದಲ್ಲಿ ಒತ್ತಬೇಕು ಎಂಬುದಾಗಿ ಪ್ರೋಗ್ರಾಂ ನಿಮ್ಮನ್ನು ಕೇಳಿಕೊಳ್ಳುತ್ತದೆ.
-
ಯಾರು ತಮ್ಮ ಸ್ಪರ್ಶ ಟೈಪಿಂಗ್ ಕೌಶಲ್ಯಗಳನ್ನು ಉತ್ತಮಪಡಿಸಿಕೊಳ್ಳಬೇಕೆಂದು ಇಚ್ಛಿಸುತ್ತಾರೆಯೋ ಅವರೆಲ್ಲರಿಗಾಗಿ ಟೈಪಿಂಗ್ ಅಧ್ಯಯನ ಇದೆ. ಸ್ಪರ್ಶ ಟೈಪಿಂಗ್ ಅನ್ನುವುದು ಕೀಲಿಮಣೆ ನೋಡದೆಯೇ ಸರಿಯಾದ ಕೀಲಿಗಳನ್ನು ಟೈಪ್ ಮಾಡಲು ಸಾಧ್ಯವಾಗಿಸುವ ಕೌಶಲ್ಯ.
-
ಹೌದು, ಅಕ್ಷರ ವೈಕಲ್ಯ ಇರುವ ಜನರಿಗೂ ಕೂಡ ಟೈಪಿಂಗ್ ಅಧ್ಯಯನ ಯೋಗ್ಯವಾಗಿದೆ. ಅಕ್ಷರ ವೈಕಲ್ಯ ಇರುವ, ಸ್ಪರ್ಶ ಟೈಪಿಂಗ್ ಕೌಶಲ್ಯ ಇಲ್ಲದವರಿಗಿಂತಲೂ ಸ್ಪರ್ಶ ಟೈಪಿಂಗ್ ಕೌಶಲ್ಯಗಳನ್ನು ತಿಳಿದಿರುವ ವ್ಯಕ್ತಿಗೆ ಇದರಿಂದ ವಿಶೇಷ ಪ್ರಯೋಜನ ಇದೆ. (ಅಕ್ಷರ ವೈಕಲ್ಯ ಇರುವ ಕೆಲವು ಜನರಿಗೆ ಕೈಬರಹದ ಪಠ್ಯ ಕಷ್ಟವಾಗುವುದರಿಂದ, ವೇಗ ಮತ್ತು ಓದುವಿಕೆಯ ಎರಡೂ ದೃಷ್ಟಿಯಿಂದಲೂ ಅವರಿಗೆ ಟೈಪಿಂಗ್ ಬರವಣಿಗೆಯಿಂದ ವಿಶೇಷ ಪ್ರಯೋಜನವಾಗಬಹುದು.) ಪಠ್ಯವನ್ನು ಗಣಕಯಂತ್ರದ ಮೇಲೆ ನೋಡಿ ಕಾಗುಣಿತವನ್ನು ಸರಿಪಡಿಸಬಹುದು ಎಂಬ ಕಾರಣಕ್ಕೆ ಇದು ಖಂಡಿತವಾಗಿಯೂ ಪ್ರಯೋಜನಕಾರಿ.