ನೀವು ಇನ್ನೂ ಎರಡು ಬೆರಳುಗಳನ್ನು ಬಳಸಿ ಟೈಪ್ ಮಾಡುತ್ತಿದ್ದೀರಾ? ಪ್ರತೀ ಒತ್ತುವಿಕೆಗೆ ಮೊದಲು ಕೀಲಿಮಣೆ ಮೇಲೆ ಕಣ್ಣು ಹಾಯಿಸಬೇಕಾಗುತ್ತದೆಯೆ?
ಸ್ಪರ್ಶ ಟೈಪಿಂಗ್ ಅಧ್ಯಯನವು ಒಂದು ಉಚಿತವಾದ, ಬಳಕೆದಾರ ಸ್ನೇಹಿ ಕಲಿಕೆಯ ಜಾಲತಾಣವಾಗಿದ್ದು, ನಿಮ್ಮ ಟೈಪಿಂಗ್ ವೇಗ ಮತ್ತು ನಿಖರತೆಯನ್ನು ಸುಧಾರಿಸಲು ಸಹಾಯವಾಗುವಂತೆ ಅದನ್ನು ವಿನ್ಯಾಸ ಮಾಡಲಾಗಿದೆ.
ಒಮ್ಮೆ ನೀವು ಸ್ಪರ್ಶ ಟೈಪಿಂಗ್ ಬಳಸಲಾರಂಭಿಸಿದರೆ, ನೀವು ಟೈಪ್ ಮಾಡಬಯಸುವ ಅಕ್ಷರಗಳಿಗಾಗಿ ಕೀಲಿಮಣೆ ನೋಡುವ ಅಗತ್ಯವಿರುವುದಿಲ್ಲ ಮತ್ತು ನೀವು ಹೆಚ್ಚು ವೇಗವಾಗಿ ಟೈಪ್ ಮಾಡಬಹುದು!
ಸ್ಪರ್ಶ ಟೈಪಿಂಗ್ ಎಂಬುದು ಕಣ್ಣಿನ ದೃಷ್ಟಿಯ ಬದಲು ಸ್ನಾಯುಗಳ ನೆನಪಿನ ಮೇಲೆ ಆಧಾರಿತ ವಿಧಾನ. ವಿಶೇಷವಾಗಿ ನೀವು ದೃಶ್ಯಮೂಲದ ಪಠ್ಯವನ್ನು ಭಾಷಾಂತರಿಸಬೇಕಿದ್ದಲ್ಲಿ, ಈ ವಿಧಾನದಲ್ಲಿ ಬಹಳ ವೇಗವಾಗಿ ಮಾಹಿತಿ ನಮೂದಿಸುವುದು ಸಾಧ್ಯವಿದೆ.
ಸ್ಪರ್ಶ ಟೈಪಿಂಗ್ ವಿಧಾನದಲ್ಲಿ ಟೈಪ್ ಮಾಡುವುದು ನಿಮ್ಮ ಗಣಕಯಂತ್ರದ ಉತ್ಪಾದಕತೆಯನ್ನು ಗಮನಾರ್ಹವಾಗಿ ಹೆಚ್ಚಿಸುವುದಲ್ಲದೆ; ಅದು ಮಾಹಿತಿ ನಮೂದಿಸುವ ವೇಗವನ್ನು ಹೆಚ್ಚಿಸುತ್ತದೆ ಮತ್ತು, ಸಾಧ್ಯವಿದ್ದಲ್ಲೆಲ್ಲ ನಿಮ್ಮ ಕಣ್ಣಿನ ಆಯಾಸ ಮತ್ತು ಸಂಭಾವ್ಯ ಹಾನಿಗಳನ್ನು ಕಡಿಮೆಗೊಳಿಸುತ್ತದೆ.
ಸ್ಪರ್ಶ ಟೈಪಿಂಗ್ ಅಧ್ಯಯನದಲ್ಲಿ ೧೫ ಪಾಠಗಳಿದ್ದು, ಒಂದು ವೇಗ ಪರೀಕ್ಷೆ ಮತ್ತು ನೀವು ಹಂತಹಂತವಾಗಿ ಕಲಿಯಲು ಅನುವು ಮಾಡಿಕೊಡುವ ಆಟಗಳಿದ್ದು, ನಿಮ್ಮ ಮುನ್ನಡೆಯ ಮೇಲೆ ನೀವೇ ನಿಗಾ ಇರಿಸಿಕೊಂಡು ಇದನ್ನು ಆನಂದಿಸಬಹುದು!